-
ವಿಶ್ವ ಆತ್ಮಹತ್ಯೆ ತಡೆ ದಿನದ (World Suicide Prevention Day) ಆತ್ಮಹತ್ಯೆ ಪರಿಹಾರವಲ್ಲ, ಬದುಕಿನ ಸವಾಲು ಎದುರಿಸಲು ಜೊತೆಯಾಗೋಣ – ‘ಮಾನವೀಯತೆ ಚಾರಿಟೇಬಲ್ ಟ್ರಸ್ಟ್’ ಕರೆ

ವಿಶ್ವ ಆತ್ಮಹತ್ಯೆ ತಡೆ ದಿನದ (World Suicide Prevention Day) ಆತ್ಮಹತ್ಯೆ ಪರಿಹಾರವಲ್ಲ, ಬದುಕಿನ ಸವಾಲು ಎದುರಿಸಲು ಜೊತೆಯಾಗೋಣ – ‘ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ವಿಶ್ವ ಆತ್ಮಹತ್ಯೆ ತಡೆ ದಿನ: ಭರವಸೆಯ ಬೆಳಕಾಗೋಣ, ಜೀವ ಉಳಿಸೋಣಪ್ರತಿಯೊಂದು ಜೀವವೂ ಅಮೂಲ್ಯ. ಜೀವನದಲ್ಲಿ ಎದುರಾಗುವ ಸವಾಲುಗಳು, ಕಷ್ಟಗಳು, ನಿರಾಸೆಗಳು ತಾತ್ಕಾಲಿಕ, ಆದರೆ ಜೀವನ ಶಾಶ್ವತ. ಕೆಲವೊಮ್ಮೆ ಕತ್ತಲೆ ದಟ್ಟವಾಗಿದ್ದಾಗ ದಾರಿ ಕಾಣದೆ ಮನಸ್ಸು ಸೋಲುವುದು ಸಹಜ, ಆದರೆ ಆತ್ಮಹತ್ಯೆ ಎಂದಿಗೂ ಯಾವುದಕ್ಕೂ ಪರಿಹಾರವಲ್ಲ.ಸೆಪ್ಟೆಂಬರ್ 10 – ವಿಶ್ವ ಆತ್ಮಹತ್ಯೆ ತಡೆ…
Search
Manaviyathe charitable trust
ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನ ಪರಿಚಯ
ಮಾನವೀಯತೆಯ ಕುರಿತು ಹೇಳುವುದಾದರೆ ಸಾವಿರ ಪುಸ್ತಕಗಳನ್ನು ಬರೆದರೂ ಸಾಲದು, ಅದೊಂದು ಮಹಾಸಾಗರದಂತೆ. ನಿಮ್ಮಲ್ಲಿರುವ ಮಾನವೀಯತೆಯು ನಿಮ್ಮ ಸಂಸ್ಕಾರವನ್ನು ಎತ್ತಿಹಿಡಿಯುತ್ತದೆ. ಜೀವನದಲ್ಲಿ ಒಳ್ಳೆಯ ಗುಣಗಳಿದ್ದರೆ ಮಾತ್ರ ಸಾಲದು, ಅದರ ಜೊತೆಗೆ ‘ಮಾನವೀಯತೆ’ ಎಂಬ ಸಣ್ಣ ಗುಣ ನಮ್ಮಲ್ಲಿದ್ದರೆ ಮಾತ್ರ ಬದುಕಿಗೊಂದು ಅರ್ಥ ಮತ್ತು ಸಾರ್ಥಕತೆ ಸಿಗುತ್ತದೆ.
ಜೀವನದಲ್ಲಿ ಶ್ರೀಮಂತ ಹಾಗೂ ಬಡವ ಎನ್ನುವುದು ಮುಖ್ಯವಲ್ಲ. ಶ್ರೀಮಂತನು ಒಳ್ಳೆಯ ಉಡುಪುಗಳನ್ನು ಧರಿಸಬಹುದು, ಆಸ್ತಿ-ಅಂತಸ್ತು ಹೊಂದಿರಬಹುದು; ಆದರೆ ಅವನಲ್ಲಿ ಮಾನವೀಯ ಗುಣಗಳಿಲ್ಲದಿದ್ದರೆ ಅವನನ್ನು ನಿಜವಾದ ಶ್ರೀಮಂತ ಎಂದು ಕರೆಯಲು ಸಾಧ್ಯವಿಲ್ಲ. ಮಾನವೀಯತೆ ಎನ್ನುವುದು ಕೇವಲ ಒಂದು ಶಬ್ದಕ್ಕೆ ಸೀಮಿತವಾಗಿಲ್ಲ. ಅದು ಕರುಣೆ, ಸೌಹಾರ್ದತೆ, ಪ್ರೀತಿ, ವಾತ್ಸಲ್ಯ, ಮಮತೆ ಹಾಗೂ ಉತ್ತಮ ವ್ಯಕ್ತಿತ್ವಗಳ ಸಮ್ಮಿಲನ. ಇರುವವರು ಇಲ್ಲದವರಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನೆರವಾಗುವುದೇ ನಿಜವಾದ ಮಾನವೀಯತೆ. ನಮ್ಮ ಪ್ರಕಾರ ಮಾನವೀಯತೆ ಉಳ್ಳವನೇ ಶ್ರೀಮಂತ, ಮಾನವೀಯತೆ ಇಲ್ಲದವನೇ ಬಡವ.
ಕೋಟಿ ಕೋಟಿ ಹಣವಿದ್ದರೂ ಮೌಲ್ಯವಿಲ್ಲದ ಜೀವನ ವ್ಯರ್ಥ. ಜೀವನವೆಂಬ ದೋಣಿಗೆ ‘ಮಾನವೀಯತೆ’ ಎಂಬ ನಾವಿಕ ಹಾಗೂ ‘ದಾನಧರ್ಮ’ ಎಂಬ ಹುಟ್ಟು (ದೋಣಿ ನಡೆಸುವ ಕೋಲು) ಅತ್ಯಗತ್ಯ. ಜೀವನವು ಕೇವಲ ಹಣ, ಆಸ್ತಿ, ಅಂತಸ್ತು ಹಾಗೂ ಒಡವೆಗಳಿಂದ ಕೂಡಿರುವುದಕ್ಕಿಂತ ಖುಷಿ, ಪ್ರೀತಿ, ಸ್ಪಂದನೆ, ತಾಳ್ಮೆ ಮತ್ತು ಮಾನವೀಯ ಮೌಲ್ಯಗಳಿಂದ ಕೂಡಿದ್ದರೆ ಸಾಕು. ಆದ್ದರಿಂದ ಬದುಕಿನಲ್ಲಿ ನಾವೆಲ್ಲರೂ ಮಾನವೀಯತೆಯನ್ನು ಅಳವಡಿಸಿಕೊಳ್ಳಬೇಕಿದೆ. ‘ಮಾನವೀಯತೆ’ ಎಂಬ ಪದವೇ ಒಂದು ಅದ್ಭುತ ಶಕ್ತಿ; ಅದು ಮನಸ್ಸಿನಲ್ಲಿ ಅಪಾರ ಭಾವನೆಗಳನ್ನು ಮೂಡಿಸುತ್ತದೆ.
ನಮ್ಮ ಸಂಸ್ಥೆಯಿಂದ ಒಂದೇ ಒಂದು ವಿನಂತಿ—ಮಾನವೀಯತೆ ಚಾರಿಟೇಬಲ್ ಟ್ರಸ್ಟ್‌ಗೆ ಸೇರ್ಪಡೆಯಾಗುವ ಪ್ರತಿಯೊಬ್ಬ ಸ್ವಯಂಸೇವಕರೂ ನಮ್ಮ ಮಾನವ ಸಂಪನ್ಮೂಲದ ನಾಯಕರು. ನೀವು ಈ ಸೇವಾ ಸಂಸ್ಥೆಯ ಮುಖ್ಯ ಅಂಗವಾಗಿದ್ದು, ಮಾನವೀಯತೆಯ ಕಾರ್ಯಗಳು ನಿಮ್ಮಿಂದಲೇ ಪ್ರಾರಂಭವಾಗಬೇಕು. ಅದಕ್ಕಾಗಿ ನಾವು ಒಂದು ಸೂಕ್ತ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದು ಯಾರೋ ಒಬ್ಬರಿಂದ ಆಗುವ ಕೆಲಸವಲ್ಲ.
ಮಾನವೀಯತೆಯ ಕುರಿತು ಚಿಂತನೆ ಹಾಗೂ ಕಾಳಜಿಯನ್ನು ನಿಮ್ಮಿಂದಲೇ ಪ್ರಾರಂಭಿಸಿ. ಸ್ವಯಂಪ್ರೇರಿತರಾಗಿ ನಮ್ಮ ಸಂಸ್ಥೆಗೆ ಸ್ವಯಂಸೇವಕರಾಗಿ ಬನ್ನಿ. ಮಾನವೀಯತೆ ಎಂಬುದು ಎಲ್ಲ ಧರ್ಮಗಳಿಗಿಂತ ಮಿಗಿಲಾದದ್ದು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಂಡಾಗ ಮಾತ್ರ ಇದರ ನಿಜವಾದ ಮೌಲ್ಯ ನಮಗೆ ತಿಳಿಯುತ್ತದೆ. ಬನ್ನಿ, ನಮ್ಮ ಹಾಗೂ ನಿಮ್ಮ ಸಂಸ್ಥೆಯ ಭಾಗವಾಗಿ ಸಮಾಜ ಸೇವೆಗೆ ಕೈಜೋಡಿಸಿ.
- ಪ್ರಕಟಣೆ: ಆಡಳಿತ ಮಂಡಳಿ
Archive
Categories
Recent Posts
- ಮಾನವೀಯತೆಯೇ ಇಂದಿನ ಸಮಾಜಕ್ಕೆ ದಾರಿದೀಪ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಗೀತಾಚಾರ್ಯನ ತತ್ತ್ವ
- ಭಾರತದ ಆಚರಣೆಗಳು ಮತ್ತು ಜಾಗತಿಕ ದಿನಗಳು: ಮಾನವೀಯತೆಯ ದಾರಿಯಲ್ಲಿ ಬೆಳಕಿನ ಭರವಸೆ
- ಧ್ಯೇಯ ವಾಕ್ಯ: “ಅಸಹಾಯಕರಿಗೆ ನ್ಯಾಯದ ಅರಿವು, ನೊಂದವರ ಬಾಳಿಗೆ ಹೊಸ ಭರವಸೆಯ ಬೆಳಕು.”
- ಸ್ವಾಪ್ ಐಡಿಯಾಸ್ ಡೇ: ಆಲೋಚನೆಗಳ ವಿನಿಮಯ ಮತ್ತು ಮಾನವೀಯತೆಯಿಂದ ಸಮಾಜ ಬದಲಾವಣೆ ಸಾಧ್ಯ
- ಪತ್ರಿಕಾ ಪ್ರಕಟಣೆ (Press Release)
Pages
- ABOUT
- Become a Volunteer
- Blog
- Cart
- Checkout
- Contact
- copyrights
- Donate Books & School Bags for Needy Students
- Drive Sustainable
- Education
- Empowerment
- Events
- Gallery Media
- Gift education Donate
- Health
- Home
- Legal team
- Manaviyathe News
- My account
- News & Videos
- Our Legal Status & Certificate
- Our Projects
- Our Team
- Privacy policy
- Provide Essentials
Tags
Manaviyathe Gallery














